ಮ್ಯೂನಿಕ್ ನಲ್ಲಿ ವರ್ಷಧಾರೆಯಾಗಿ ಹರಿದ ಚೊಚ್ಚಲ “ಕನ್ನಡ ಕಹಳೆ – ಸಾಹಿತ್ಯ ಸಂಜೆ”

ಜರ್ಮನಿಯ ಕನ್ನಡ ಸಾಂಸ್ಕೃತಿಕ ನಗರಿ ಮ್ಯೂನಿಕ್ ನಲ್ಲಿ ದಿ. 08.09.2022 ರಂದು ಸಿರಿಗನ್ನಡ ಕೂಟ ಮ್ಯೂನಿಕ್ e.V ಯ ವತಿಯಿಂದ ಆಯೋಜಿಸಲ್ಪಟ್ಟಿದ್ದ ಮತ್ತು ಅವರ ನೇತೃತ್ವದಲ್ಲಿ ನಡೆದ ಮೊಟ್ಟ ಮೊದಲ ಸಾಹಿತ್ಯ ಕಲರವ “ಕನ್ನಡ ಕಹಳೆ – ಸಾಹಿತ್ಯ ಸಂಜೆ” ಎಂಬ ಸ್ವರಚಿತ ಸಣ್ಣ ಕಥೆ, ಕಾವ್ಯ ಮತ್ತು ಲೇಖನ ವಾಚನ ಕಾರ್ಯಕ್ರಮವು ಯಶಸ್ವಿಯಾಗಿ ಮೂಡಿಬಂತು.

ಈ ಕಾರ್ಯಕ್ರಮದಲ್ಲಿ ಜರ್ಮನಿಯ ನಾನಾ ಭಾಗದಿಂದ ಮತ್ತು ನೆದರ್ಲ್ಯಾಂಡ್ಸ್ ನಿಂದ ಕವಿಗಳು ಲೇಖಕರುಗಳು ಭಾಗವಹಿಸಿ ತಮ್ಮ ಸ್ವರಚಿತ ಬರಹಗಳನ್ನು ವಾಚಿಸಿದರು. ಈ ಕಾರ್ಯಕ್ರಮವು Zoom Meeting ಮುಖೇನ ಆನ್ ಲೈನ್ ನಲ್ಲಿ ನಡೆಯಿತು ಮತ್ತು ಸಿರಿಗನ್ನಡ ಕೂಟ ಮ್ಯೂನಿಕ್ e.Vಯ Facebook ಖಾತೆಯಲ್ಲಿ ಆಸಕ್ತ ಪ್ರೇಕ್ಷಕರಿಗಾಗಿ ಕಾರ್ಯಕ್ರಮದ ನೇರ ಪ್ರಸಾರವನ್ನು ಆಯೋಜಿಸಲಾಗಿತ್ತು.

ಈ ಕಾರ್ಯಕ್ರಮವು ಪ್ರೇಕ್ಷಕರನ್ನು ಕನ್ನಡ ಸಾಹಿತ್ಯಧಾರೆಯಲ್ಲಿ ಮಿಂದಿಸಿ ಮನದಿಂದ ಮನಕ್ಕೆ ಹರಿದು ಪ್ರೇಕ್ಷಕರ ಕಾವ್ಯಸ್ಪೂರ್ತಿಯು ಕವಿಮನಗಳ ಮನಕ್ಕೆ ಮತ್ತಷ್ಟು ಭಾವತುಂಬಿತು. ಕಾರ್ಯಕ್ರಮವು ಬಹಳ ಅಚ್ಚುಕಟ್ಟಾಗಿ , ಶಿಸ್ತಿನಿಂದ ಮೂಡಿಬಂತು ಮತ್ತು ಇಂತಹ ಸದಭಿರುಚಿಯ ಕಾರ್ಯಕ್ರಮವನ್ನು ನಿಯಮಿತವಾಗಿ ನಡೆಸಬೇಕೆಂಬ ಪ್ರೇಕ್ಷಕರ ಅನಿಸಿಕೆಯ ಸಿಹಿನುಡಿಗಳು ಬರಹಗಾರರಿಗೆ ಮತ್ತು ಆಯೋಜಕರಿಗೆ ಸ್ಪೂರ್ತಿದಾಯಕವಾಗಿತ್ತು.

https://fb.watch/fp-vfN0EOy/ ( ನಮ್ಮ ಕನ್ನಡ ಕಹಳೆ ಕಾರ್ಯಕ್ರಮ ನೊಡಲಾಗದಿದ್ದಲ್ಲಿ ಇದೋ ಇಲ್ಲಿದೆ ಫೇಸ್ಬುಕ್ ಲಿಂಕ್, ನೋಡಿರಿ, ಸವಿಯಿರಿ, ನಿಮ್ಮ ಅನಿಸಿಕೆ ತಿಳಿಸಿರಿ 🙏🏼)

ಇಂತಿ

ನಮ್ಮೆಲ್ಲರ ನೆಚ್ಚಿನ ಕನ್ನಡ ಕುಟುಂಬ

ಸಿರಿಗನ್ನಡ ಕೂಟ ಮ್ಯೂನಿಕ್ e.V, ಮ್ಯೂನಿಕ್

May be an image of 12 people and indoor