2011 ರಲ್ಲಿ ಕೆಲವು ಸಹೃದಯ ಕನ್ನಡ ಬಂಧುಗಳು ಸೇರಿಕೊಂಡು ಮ್ಯುನಿಕ್ ನಗರ ಹಾಗು ಸುತ್ತಮುತ್ತಲಿನ ಕನ್ನಡಿಗರನ್ನು ಒಗ್ಗೂಡಿಸಲು ” ಕನ್ನಡ ಗೆಳೆಯರ ಬಳಗ ” ವನ್ನ ಸ್ಥಾಪಿಸಿ , ಮೊದಲ ಬಾರಿಗೆ ಮ್ಯುನಿಕ್ ನಲ್ಲಿ ರಾಜ್ಯೋತ್ಸವವನ್ನ ಆಚರಿಸಲಾಯಿತು .

ನಂತರ ಸತತವಾಗಿ 2012 ರಿಂದ ಹಲವಾರು ಕನ್ನಡ ಪರ ಕಾರ್ಯಕ್ರಮಗಳನ್ನ ಹಮ್ಮಿಕೊಂಡು ಕನ್ನಡಿಗರನ್ನ ಒಟ್ಟಾಗಿ ಸೇರಿಸುವಂತಹ ಕೆಲಸಗಳನ್ನ ಮಾಡುತ್ತಾ ಬಂದಿದೆ

ಕನ್ನಡ ಗೆಳೆಯರ ಬಳಗ ಎಂದು ಶುರುವಾದ ಈ ಕನ್ನಡದ ಕುಟುಂಬವು, 2013 ರಲ್ಲಿ ಮ್ಯುನಿಕ್ ಕನ್ನಡ ಬಳಗವಾಗಿ ನಂತರ 2016 ರಲ್ಲಿ “ಸಿರಿಗನ್ನಡ ಕೂಟ” ಎಂದು ನಾಮಕರಣಗೊಂಡು ಇಂದಿನವರೆಗೂ ಸಾಗುತ್ತಾ ಬಂದಿದೆ.

ಬರೀ ರಾಜ್ಯೋತ್ಸವ ಅಲ್ಲದೇ, ಹಲವಾರು ಸಾಂಸ್ಕೃತಿಕ ಚಟುವಟಿಕೆಗಳನ್ನ ಆಯೋಜಿಸಿ ಕನ್ನಡಿಗರನ್ನ ಒಂದುಗೂಡಿಸುವ ಕೆಲಸ ಮಾಡುತ್ತಿದೆ.

ಮ್ಯುನಿಕ್ ಕನ್ನಡ ಬಳಗದಿಂದ ಪ್ರೇರಣೆಗೊಂಡು ಜರ್ಮನಿಯ ಹಲವಾರು ನಗರಗಳಲ್ಲಿ, ಕನ್ನಡ ಬಳಗ ಶುರು ಮಾಡಲಾಯಿತು. 2018 ರಲ್ಲಿ ಸಿರಿಗನ್ನಡ ಕೂಟದ ವತಿಯಿಂದ ” ಜಗಲಿ – ಕಟ್ಟೆ ” ಕಾರ್ಯಕ್ರಮ ಹಮ್ಮಿಕೊಂಡು, ಸಾಂಸ್ಕೃತಿಕ ಚಟುವಟಿಕೆಗಳನ್ನ ಏರ್ಪಡಿಸಿ, ಕನ್ನಡ ಬಂಧುಗಳ ಕಲಾ – ಕೌಶಲ್ಯಗಳನ್ನ ಪ್ರದರ್ಶಿಸುವಂತಹ ಒಂದು ಸುಂದರವಾದ ವೇದಿಕೆಯನ್ನ ಹುಟ್ಟು ಹಾಕಿತು.

ಲಲಿತ ಕಲೆ, ಸಾಹಿತ್ಯ, ಜಾನಪದ ಕಲೆ, ನಾಟಕ ಇನ್ನು ಮುಂತಾದ ಚಟುವಟಿಕೆಗಳಲ್ಲಿ ಹಿರಿಯರು – ಕಿರಿಯರು ಜತೆಗೂಡಿ ಪಾಲ್ಗೊಂಡು ಸಂತೋಷಿಸಿದರು. ಹಾಗೆಯೇ 2019 ರಲ್ಲಿ ಸಿರಿಗನ್ನಡ ಕೂಟ ಹಾಗು ಜೆರ್ಮನಿಯ ಇತರ ಕನ್ನಡ ಕೂಟಗಳ ಜೊತೆಗೂಡಿ “ಕನ್ನಡ ಕಲಿ ” ಎಂಬ ಬಾಷಾಭಿಯಾನ ಶುರು ಮಾಡಿತು. ಮಕ್ಕಳಿಗೆ ಹಾಗು ಬಾಷೆಯನ್ನ ಕಲಿಯುವ ಆಸಕ್ತರಿಗೆ ಅವಕಾಶ ಹುಟ್ಟು ಹಾಕಿದೆ. ಇದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಪ್ರಾಯೋಜಿತ ಕಾರ್ಯಕ್ರಮ.

2021 ರಲ್ಲಿ, ಹತ್ತು ವರ್ಷ ಪೂರೈಸಿದ ನಮ್ಮ ನಿಮ್ಮೆಲ್ಲರ “ಸಿರಿಗನ್ನಡಕೂಟ”  ದಶಮಾನೋತ್ಸವ ಸಂಭ್ರಮ ಆಚರಿಸಿತು.